Chief Editor
Manohar. R (Manu)
Photo Journalist
chitrataramanu@gmail.com
+91 9845549026
ಬೆಂಗಳೂರಿನಲ್ಲಿ ‘ಸಾರಿಕಣೇ ಸಾಂಗ್
Posted date: 26 Tue, Nov 2013 – 09:21:01 AM

  ಅಣಜಿ ನಾಗರಾಜ್ ಅರ್ಪಿಸುವ ಡೈರೆಕ್ಟರ್ ಡ್ರೀಮ್ ಕ್ರಿಯೇಷನ್ಸ್ ಲಾಂಛನದಲ್ಲಿ ಆನಂದಕುಮಾರ್, ಲೋಕೇಶ್ ಹಾಗೂ ಗಿರೀಶ್.ಜಿ.ರಜಾ ಅವರು ನಿರ್ಮಿಸುತ್ತಿರುವ ‘ಸಾರಿಕಣೇ‘ ಚಿತ್ರಕ್ಕಾಗಿ ಮಂಜುನಾಥ್‌ರಾವ್ ಬರೆದಿರುವ ‘ಪಟಾಕಿ ಪಟಾಕಿ ಹುಡ್ಗೀರು ಪಟಾಕಿ‘ ಎಂಬ ಹಾಡಿನ ಚಿತ್ರೀಕರಣ ಹೊಸಕೆರೆಹಳ್ಳಿಯ ಪಿ.ಇ.ಎಸ್ ಕಾಲೇಜಿನ ಬಳಿ ನಡೆದಿದೆ. ರೂಪೇಶ್, ಅರ್ಚನ ಹಾಗೂ ಮಮತಾ ರಾಹುತ್ ಅಭಿನಯಿಸಿದ ಈ ಹಾಡಿಗೆ ರಾಜು ನೃತ್ಯ ನಿರ್ದೇಶನ ಮಾಡಿದ್ದಾರೆ.
    ರೂಪೇಶ್.ಜಿ.ರಾಜಾ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶನವನ್ನು ಮಾಡುತ್ತಿದ್ದಾರೆ. ಶಾಹುರಾಜ್ ಶಿಂಧೆ, ವಿಜಯಲಕ್ಷ್ಮೀ ಸಿಂಗ್, ದಿನಕರ್ ತೂಗುದೀಪ ಅವರ ಬಳಿ ಸಹಾಯಕರಾಗಿ ದುಡಿದಿರುವ ರೂಪೇಶ್ ‘ಪ್ಯಾಸೆಂಜರ್‘ ಎಂಬ ಚಿತ್ರವನ್ನು ಸ್ವತಂತ್ರವಾಗಿ ನಿರ್ದೇಶಿಸಿದ್ದಾರೆ.
   ಐದು ಹಾಡುಗಳಿರುವ ಈ ಚಿತ್ರಕ್ಕೆ ಪೀಟರ್.ಎಂ.ಜೋಸಫ಼್ ಸಂಗೀತ ನೀಡುತ್ತಿದ್ದಾರೆ. ರೇಣುಕುಮಾರ್ ಛಾಯಾಗ್ರಹಣ, ದೀಪು.ಎಸ್.ಕುಮಾರ್ ಸಂಕಲನ ಹಾಗೂ ಕೌರವ ವೆಂಕಟೇಶ್ ಸಾಹಸ ನಿರ್ದೇಶನವಿರುವ ಈ ಚಿತ್ರದ ನಾಯಕರಾಗಿ ರೂಪೇಶ್.ಜಿ.ರಾಜಾ ನಟಿಸುತ್ತಿದ್ದಾರೆ. ಅರ್ಚನ ಈ ಚಿತ್ರದ ನಾಯಕಿ. ಹರೀಶ್‌ರೈ, ಸಂಗೀತ, ಟೆನ್ನಿಸ್‌ಕೃಷ್ಣ, ರಮಾನಂದ್, ಮಮತಾರಾಹುತ್, ಪೆಟ್ರೋಲ್‌ಪ್ರಸನ್ನ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಬೆಂಗಳೂರಿನಲ್ಲಿ ‘ಸಾರಿಕಣೇ ಸಾಂಗ್ - Chitratara.com
Copyright 2009 chitratara.com Reproduction is forbidden unless authorized. All rights reserved.